ಐಟಿ ಜನರಿಗೆ ಕೈ ತುಂಬಾ ಸಂಬಳ
ಸುಖದ ಸುಪ್ಪತ್ತಿಗೆ ಅನ್ನುವವರನ್ನು
ನಿಲ್ಲಿಸಿ ನನ್ನ ಮುಂದೆ ತಂದು
ನನ್ನ ಕುರ್ಚಿಯ ಮೇಲೆ ಒಂದು ವರ್ಷ ಕೂರಿಸಿ
ಆಮೇಲೆ ನೋಡೋಣ ಇನ್ನೂ
ಇದ್ದಾರೋ ಇಲ್ಲವೋ ಎಂದು
ನಾಲ್ಕು ವರ್ಷ ಗೆದ್ದೋ ಬಿದ್ದೋ ಕಲಿತು
ಕೆಲಸ ದಕ್ಕಿಸಿಕೊಂಡಾಗ ಎಷ್ಟು ಸಂಭ್ರಮ
ಎದೆಯೊಳಗೆ ಹೊಸ ಪುಳಕ
ಸಿಲಿಕಾನ್ ಊರೊಳಗೆ ಯಾವಾಗ ಹೊಕ್ಕುವೆ
ಹೊಸ ಅಸ್ತಿತ್ವವ ಪಡೆದುಕೊಳ್ಳುವೆ
ಜನರ ಮೆಚ್ಚಿಸುವೆನೆಂಬ ತವಕ
ಕನಸ ಕಂಗಳ ಆ ಹೊಳಪು
ಮಾಸಿ ಹೋಯಿತು ಬರಬರುತ್ತ
ಯಾಂತ್ರಿಕ ಲೋಕದ 'glare' ನೆದುರು
ಉಳಿದಿಹುದಷ್ಟೇ ಗೊಂದಲ
ದಾರಿತಪ್ಪಿದ ತಳಮಳ
ಬೆನ್ನು, ಕತ್ತುನೋವಿನ ಕಸರು
ವಾರಾಂತ್ಯವಾಗಿಲ್ಲ
ರವಿ ಜಾರಿ ಹೋಗಿಲ್ಲವಿನ್ನೂ
ತಲೆ ತುಂಬಾ ಮರುದಿನದ ಪಾಡು
ಬೇಡಬೇಡವೆಂದರೂ ಕಿವಿಯೊಳಗೆ
ಗುಣುಗುಣಿಸುತ್ತಿರುವುದದೇ
'ಮ್ಯಾನಿಕ್ ಮಂಡೇ' ಹಾಡು
ವಾರ ಶುರು, ಎಷ್ಟು ಮಳೆಎಂದರೂ
ಕೆಟ್ಟ ಬಿಸಿಲೆಂದರೂ
ಹಿಡಿಯಬೇಕು ಆಫೀಸಿನ ದಾರಿ
ಮಗು ಬಿಕ್ಕಿದರೇನು
ಬಂಧು ಬಳಗವದೇನು
ಸುಲಭದ ಹಾದಿ, 'ಸಾರೀ'
ಒಂಬತ್ತಕ್ಕೆ ಜಾಗಿಂಗ್ ಮಾಡುವವರು
ಕ್ಲಬ್ನಲ್ಲಿ ಕೇಕೆ ಹೊಡೆಯುವವರು
ನಮಗೆ ಮಾತ್ರ ಹೊರಡುವ ತರಾತುರಿ
ಹಾಲನ್ನ ಒಳತೆಗೆಯದೆ
ಗೊರಕೆ ಹೊಡೆಯುವ ಪಕ್ಕದ ಮನೆಯ
ಹೆಂಗಸ ಕಂಡರೆ ಹೊಟ್ಟೆಯುರಿ
ವಾಹನದಲ್ಲಿ ಕೂತರೇನಂತೆ
ಅದೇನು ಪುಷ್ಪಕವಿಮಾನವೇ
ನಿಮಿಷಾರ್ಧದಲ್ಲಿ ದಡ ತಲುಪಿಸಲು?
ಬೈಕು ಕಾರುಗಳ ಷುಮಾಕರುಗಳು
ದೈತ್ಯ ದರ್ಪದ ಬಸ್ಸುಗಳು ಎಲ್ಲ
ಹಿಡಿಯಬೇಕು ಟ್ರಾಫಿಕ್ ಇರುವೆಯ ಸಾಲು
ಹೊಗೆ ಮುಖಕ್ಕೆರಚುವವರ ಬೈಯುತ್ತ
ಜಾಮಿಗೊಳಗಾದ ಅದೃಷ್ಟವ ಶಪಿಸುತ್ತ
ಗಂಟೆಗಟ್ಟಲೆ ಕೊಳೆಯುವ ಸಮಯ
ಅಂದುಕೊಂಡಿದ್ದುಂಟು ಎಷ್ಟೋ ಸಲ
ಈ ಸುಖ ಬಿಟ್ಟು ಓಡೋಣವೆಂದು
ಆದರೆ ಬರಬೇಕಲ್ಲ ಧೈರ್ಯ
ಸುಖದ ಸುಪ್ಪತ್ತಿಗೆ ಅನ್ನುವವರನ್ನು
ನಿಲ್ಲಿಸಿ ನನ್ನ ಮುಂದೆ ತಂದು
ನನ್ನ ಕುರ್ಚಿಯ ಮೇಲೆ ಒಂದು ವರ್ಷ ಕೂರಿಸಿ
ಆಮೇಲೆ ನೋಡೋಣ ಇನ್ನೂ
ಇದ್ದಾರೋ ಇಲ್ಲವೋ ಎಂದು
ನಾಲ್ಕು ವರ್ಷ ಗೆದ್ದೋ ಬಿದ್ದೋ ಕಲಿತು
ಕೆಲಸ ದಕ್ಕಿಸಿಕೊಂಡಾಗ ಎಷ್ಟು ಸಂಭ್ರಮ
ಎದೆಯೊಳಗೆ ಹೊಸ ಪುಳಕ
ಸಿಲಿಕಾನ್ ಊರೊಳಗೆ ಯಾವಾಗ ಹೊಕ್ಕುವೆ
ಹೊಸ ಅಸ್ತಿತ್ವವ ಪಡೆದುಕೊಳ್ಳುವೆ
ಜನರ ಮೆಚ್ಚಿಸುವೆನೆಂಬ ತವಕ
ಕನಸ ಕಂಗಳ ಆ ಹೊಳಪು
ಮಾಸಿ ಹೋಯಿತು ಬರಬರುತ್ತ
ಯಾಂತ್ರಿಕ ಲೋಕದ 'glare' ನೆದುರು
ಉಳಿದಿಹುದಷ್ಟೇ ಗೊಂದಲ
ದಾರಿತಪ್ಪಿದ ತಳಮಳ
ಬೆನ್ನು, ಕತ್ತುನೋವಿನ ಕಸರು
ವಾರಾಂತ್ಯವಾಗಿಲ್ಲ
ರವಿ ಜಾರಿ ಹೋಗಿಲ್ಲವಿನ್ನೂ
ತಲೆ ತುಂಬಾ ಮರುದಿನದ ಪಾಡು
ಬೇಡಬೇಡವೆಂದರೂ ಕಿವಿಯೊಳಗೆ
ಗುಣುಗುಣಿಸುತ್ತಿರುವುದದೇ
'ಮ್ಯಾನಿಕ್ ಮಂಡೇ' ಹಾಡು
ವಾರ ಶುರು, ಎಷ್ಟು ಮಳೆಎಂದರೂ
ಕೆಟ್ಟ ಬಿಸಿಲೆಂದರೂ
ಹಿಡಿಯಬೇಕು ಆಫೀಸಿನ ದಾರಿ
ಮಗು ಬಿಕ್ಕಿದರೇನು
ಬಂಧು ಬಳಗವದೇನು
ಸುಲಭದ ಹಾದಿ, 'ಸಾರೀ'
ಒಂಬತ್ತಕ್ಕೆ ಜಾಗಿಂಗ್ ಮಾಡುವವರು
ಕ್ಲಬ್ನಲ್ಲಿ ಕೇಕೆ ಹೊಡೆಯುವವರು
ನಮಗೆ ಮಾತ್ರ ಹೊರಡುವ ತರಾತುರಿ
ಹಾಲನ್ನ ಒಳತೆಗೆಯದೆ
ಗೊರಕೆ ಹೊಡೆಯುವ ಪಕ್ಕದ ಮನೆಯ
ಹೆಂಗಸ ಕಂಡರೆ ಹೊಟ್ಟೆಯುರಿ
ವಾಹನದಲ್ಲಿ ಕೂತರೇನಂತೆ
ಅದೇನು ಪುಷ್ಪಕವಿಮಾನವೇ
ನಿಮಿಷಾರ್ಧದಲ್ಲಿ ದಡ ತಲುಪಿಸಲು?
ಬೈಕು ಕಾರುಗಳ ಷುಮಾಕರುಗಳು
ದೈತ್ಯ ದರ್ಪದ ಬಸ್ಸುಗಳು ಎಲ್ಲ
ಹಿಡಿಯಬೇಕು ಟ್ರಾಫಿಕ್ ಇರುವೆಯ ಸಾಲು
ಹೊಗೆ ಮುಖಕ್ಕೆರಚುವವರ ಬೈಯುತ್ತ
ಜಾಮಿಗೊಳಗಾದ ಅದೃಷ್ಟವ ಶಪಿಸುತ್ತ
ಗಂಟೆಗಟ್ಟಲೆ ಕೊಳೆಯುವ ಸಮಯ
ಅಂದುಕೊಂಡಿದ್ದುಂಟು ಎಷ್ಟೋ ಸಲ
ಈ ಸುಖ ಬಿಟ್ಟು ಓಡೋಣವೆಂದು
ಆದರೆ ಬರಬೇಕಲ್ಲ ಧೈರ್ಯ
No comments:
Post a Comment